Thank You

ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಮನವಿ:ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ. 1) ಕಡ್ಡಾಯವಾಗಿ ಮಾಸ್ಕ್ ಧರಿಸಿ. 2) ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ. 3) ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ. 4) ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5) ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6) ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ. 7) ಪ್ರತಿದಿನ ಮಾಸ್ಕ್ ಬಳಸಿದ ನಂತರ ಬಿಸಿನೀರಿನಲ್ಲಿ ತೊಳೆದು, ಬಿಸಿಲಿನಲ್ಲಿ ಒಣಗಿಸಿ. .

Dropdown Menu

Showing posts with label ಇತರೆ. Show all posts
Showing posts with label ಇತರೆ. Show all posts

Mar 27, 2022

SSLC Exam Time Table March / April 2022

 


Aug 4, 2021

ಶೀಘ್ರದಲ್ಲೇ ನಿರೀಕ್ಷಿಸಿ. 8 ಮತ್ತು 9 ನೇ ತರಗತಿಗಳ ಗಣಿತ ಮತ್ತು ವಿಜ್ಞಾನ ವಿಷಯಗಳ ಉಚಿತ ನೋಟ್ಸ್ :

 ಆತ್ಮೀಯ ವೃತ್ತಿಬಾಂಧವರೇ,

ಶೀಘ್ರದಲ್ಲೇ ನಿರೀಕ್ಷಿಸಿ. ಮತ್ತು ನೇ ತರಗತಿಗಳ ಉಚಿತ ನೋಟ್ಸ್

57 ದಿಗಳವರೆಗೆ ಪರೀಕ್ಷಾಕಿರಣ,  ತದನಂತರ ರಾಜ್ಯಸಂಪನ್ಮೂಲ ವ್ಯಕ್ತಿಗಳ ತಂಡ ರೋಟರಿ ಸಹಯೋಗದಲ್ಲಿ ಜ್ಞಾನ ಸಿಂಚನ ಗಣಿತ ವಿಜ್ಞಾನ ವಿಷಯಗಳ ಉಚಿತ ಪುನರ್ಮನನ ತರಗತಿಗಳನ್ನು 15 ದಿಗಳವರೆಗೆ ನಡೆಸಿಕೊಟ್ಟೆವು. ವಿದ್ಯಾರ್ಥಿಗಳು, ಪೋಷಕರು ಹಾಗೂ ನಿಮ್ಮೆಲ್ಲರ ಮೆಚ್ಚುಗೆಗೆ ಪಾತ್ರವಾದ ಈ ಕಾರ್ಯಕ್ರಮ ನಮ್ಮ ಇಲಾಖಾ ಅಧಿಕಾರಿಗಳಿಂದಲೂ ಪ್ರಶಂಸೆಗೊಳಗಾಯಿತು. ಡಿ.ಎಸ್.ಇ.ಆರ್.ಟಿ.ಯ ಮಾನ್ಯ ನಿರ್ದೇಶಕರಾದ ಮಾರುತಿ ಸರ್ ಹಾಗೂ ಸಹನಿರ್ದೇಶಕರಾದ ರತ್ನಯ್ಯ ಸರ್ ಅಷ್ಟೇ ಅಲ್ಲದೇ ಅನೇಕ ಬಿ.ಇ.ಓ/ ಇ ಓ ಹಾಗೂ ಇನ್ನಿತರ ಅಧಿಕಾರಿಗಳು ತರಗತಿಗಳ ಸಂದರ್ಭದಲ್ಲಿ ನಮ್ಮೊಂದಿಗಿದ್ದು ಪ್ರೋತ್ಸಾಹದ ನುಡಿಗಳನ್ನು ನುಡಿದಿರುವುದನ್ನು ಮರೆಯುವಂತಿಲ್ಲ. ಖ್ಯಾತ ಶಿಕ್ಷಣ ತಜ್ಞರಾದ  ಡಾ. ಬಾಲಕೃಷ್ಣ ಅಡಿಗರು ಹಾಗೂ ಡಾ. ಹೆಚ್.ಎಸ್. ಗಣೇಶಭಟ್ಟರ  ಮಾರ್ಗದರ್ಶನದಲ್ಲಿ ನಮ್ಮ ತಂಡ ಯಶಸ್ವಿಯಾಗಿ ವಿದ್ಯಾರ್ಥಿಗಳ ಯಶಸ್ಸನ್ನು ಹೊರತು ಪಡಿಸಿ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಶ್ರಮವಹಿಸದ್ದು ಸ್ತುತ್ಯರ್ಹ.  ವಿಶೇಷವಾಗಿ ಎರಡೂ ವಿಷಯಗಳಲ್ಲಿ 80 ಅಂಕಗಳಿಗೆ 80 ಅಂಕಗಳ ಎಲ್ಲಾ ಪ್ರಶ್ನೆಗಳನ್ನೂ ನಮ್ಮ ಎಲ್ಲಾ ಸಂಪನ್ಮೂಲ ವ್ಯಕ್ತಿಗಳು ಚರ್ಚಿಸಿದ್ದು ಇದಕ್ಕಾಗಿ ನಮ್ಮೆಲ್ಲಾ ಸಂಪನ್ಮೂಲ ವ್ಯಕ್ತಿಗಳಿಗೆ ಹೃತ್ಪೂರ್ವಕ ಅಭಿನಂದನೆಗಳು. 

ಈಗ ತಂಡದ ಸದಸ್ಯರುಗಳ ಒತ್ತಾಸೆಯ ಅಪೇಕ್ಷೆಯಂತೆ ಇನ್ನಷ್ಟು ಸ್ನೇಹಿತರ ಸಹಕಾರದೊಂದಿಗೆ ಗಣಿತ ವಿಜ್ಞಾನ ವಿಷಯಗಳಲ್ಲಿ  8 ಮತ್ತು 9ನೇ ತರಗತಿಯ ಗಣಿತ ಮತ್ತು ವಿಜ್ಞಾನ ವಿಷಯಗಳಲ್ಲಿ ಉಚಿತ ಪ್ರಶ್ನೋತ್ತರಗಳು, ಚಟುವಟಿಕೆ ಹಾಳೆಗಳು, ವಿಡಿಯೋ ಲಿಂಕ್‍ಗಳು , ಸಿಮ್ಯುಲೇಷನ್‍ಗಳುಳ್ಳ ಏಕರೂಪದ ಸಂಪನ್ಮೂಲಗಳನ್ನು ನಿರ್ದಿಷ್ಟ ಚೌಕಟ್ಟಿನಲ್ಲಿ ಇಲಾಖೆಯ ಶಿಕ್ಷಣ ತಜ್ಞರುಗಳ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿ ಒಂದೇ ವೇದಿಕೆಯಲ್ಲಿ ಒದಗಿಸಿ ಕೊಡುವ ಯೋಜನೆಯನ್ನು ಹಮ್ಮಿಕೊಂಡಿದ್ದೇವೆ.

ಎಂದಿನಂತೆ ನಿಮ್ಮ ಸಕ್ರಿಯ ಸಲಹೆಗಳ ನಿರೀಕ್ಷೆಯಲ್ಲಿ

Jul 29, 2021

ಗೌರವಾನ್ವಿತ ಶಿಕ್ಷಕ, ಶಿಕ್ಷಣಾಸಕ್ತ ಸ್ನೇಹಿತರೇ

 *ಗೌರವಾನ್ವಿತ ಶಿಕ್ಷಕ, ಶಿಕ್ಷಣಾಸಕ್ತ ಸ್ನೇಹಿತರೇ*

        ರಾಷ್ಟ್ರೀಯ ಶಿಕ್ಷಣ ನೀತಿ 2020 ನಮ್ಮ ಸ್ಥಳೀಯ ವೈಶಿಷ್ಟ್ಯವನ್ನು ಉಳಿಸಿಕೊಂಡು ರಾಷ್ಟ್ರ, ಅಂತಾರಾಷ್ಟ್ರೀಯ ಅರಿವು ಹೊಂದುವ ಶಿಫಾರಸು ಮಾಡಿರುವುದು ತಮಗೆ ತಿಳಿದೇ ಇದೆ. ಇಂತಹದ್ದೊಂದು ಚೆಂದದ ಶಿಫಾರಸನ್ನು ಬಳಸಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ. ನಾವೆಲ್ಲಾ ಸಿದ್ಧವಾಗುವ ಪಠ್ಯಕ್ರಮ ಚೌಕಟ್ಟಿಗೆ ನಮ್ಮ ಸ್ಥಳೀಯ ಕೊಡುಗೆಗಳನ್ನು ನೀಡೋಣ. ನಮ್ಮದನ್ನು ನಾವು ಗುರುತಿಸಿ, ನಮ್ಮ ಪಾಠಗಳ ರಚನೆಗೆ ನಾವೇ ಜವಾಬ್ದಾರರಾಗೋಣ. ಆದ್ದರಿಂದ *ತಮ್ಮಲ್ಲಿ ತಮ್ಮಲ್ಲಿ ಮೂರು ಕೋರಿಕೆಗಳಿವೆ, ಯಾವುದಾದರೂ ಒಂದು, ಎರಡು ಅಥವ ಮೂರನ್ನೂ ಮಾಡಿ ಕಳಿಸಿದಲ್ಲಿ ಉಪಕೃತರಾಗುತ್ತೇವೆ*.
1. *ನಮ್ಮ ತರಗತಿ ಪ್ರಕ್ರಿಯೆ, ನಮ್ಮ ಸುತ್ತಮುತ್ತ ನಾವು ಗಮನಿಸಿದ ಉತ್ತಮ ತರಗತಿ ಪ್ರಕ್ರಿಯೆಗಳನ್ನು ಒಂದು ಅಥವ ಅರ್ಧ ಪುಟದಲ್ಲಿ ದಯವಿಟ್ಟು ಹಂಚಿಕೊಳ್ಳಲು ಕೋರಿದೆ* ಶಿಕ್ಷಕರು ಅಥವ ಸಮುದಾಯ ಮಕ್ಕಳಿಗೆ ಯಾವುದಾದರೂ ವಿಷಯವನ್ನು ಅತ್ಯುತ್ತಮವಾಗಿ ಕಲಿಸಿದ, ಕಲಿಸುವ ರೀತಿಯನ್ನು ನಾವು ಶಿಕ್ಷಣ ಶಾಸ್ತ್ರದಲ್ಲಿ ದಾಖಲಿಸುವುದು ಬಹಳ ಬಹಳ ಅಗತ್ಯ. ದಯವಿಟ್ಟು ಇಂತಹುದ್ದನ್ನು ತಾವು ಮಾಡಿದಲ್ಲಿ, ನೋಡಿದ್ದಲ್ಲಿ, ಕೇಳಿದ್ದಲ್ಲಿ ದಯವಿಟ್ಟು ಹಂಚಿಕೊಳ್ಳಿ. ಇಲ್ಲಿ ಕಟ್ಟಡ, ಕೊಠಡಿ, ಚಿತ್ರ,ಪೇಂಟಿಂಗ್, ಪಾರ್ಕ್ ಗಿಂತಲೂ ತರಗತಿಯೊಳಗೆ ಅಥವ ಹೊರಗೆ ಮಕ್ಕಳಿಗೆ ಕಲಿಸುವ ಪ್ರಕ್ರಿಯೆ ಬಹಳ ಪ್ರಮುಖವಾಗಿರುತ್ತದೆ.
2. ಎರಡನೆಯ ಕೋರಿಕೆಯಾಗಿ ತಾವು ಕಲಿಸಿದ, ಕಲಿಸುವುದನ್ನು ಗಮನಿಸಿದ ವಿಶೇಷ ವಿಷಯಗಳಿದ್ದರೆ ದಯವಿಟ್ಟು ತಿಳಿಸಿ. (ಅದು ಯಾವುದೇ ಕೌಶಲ, ವಿಷಯ ಇರಬಹುದು)
3. ಮೂರನೆಯ ಕೋರಿಕೆಯಾಗಿ ನಮ್ಮ ಮಕ್ಕಳು 21ನೇ ಶತಮಾನದಲ್ಲಿ ಕೆಲವು ಕೌಶಲಗಳನ್ನು ಅನಿವಾರ್ಯವಾಗಿ ಕಲಿಯಬೇಕಿದೆ. ಈ ಕಲಿಕೆಗಳು ಅವರ ಜೀವನ ಸುಲಲಿತಗೊಳಿಸುವುದಲ್ಲದೇ ಸಮಾಜ, ಜಗತ್ತು, ಭೂಮಿಯನ್ನು ಕಂಪನಶೀಲ ಸುಸ್ಥಿರ ಸಮಾಜವಾಗಿಸುತ್ತವೆ. ಅಂತಹಾ ಕೌಶಲಗಳೆಂದರೆ
- ಸಹಭಾಗಿತ್ವ ಕೌಶಲ
- ಸಂವಹನ ಕೌಶಲ
- ಐ ಸಿ ಟಿ ಬಳಕೆ
- ಜ್ಞಾನ ಸೃಷ್ಟಿ, ಸೃಜನಶೀಲತೆ
- ಅನುಭೂತಿ, ಸಾಂಘಿಕ ಬದುಕು.

*ದಯಮಾಡಿ ಸದರಿ ಮೂರು ಕೋರಿಕೆಯಲ್ಲಿ ರಾಜ್ಯದ ಯಾವುದೇ ಮೂಲೆಯಲ್ಲಿ  ನಿಮಗೆ ಕಂಡ ವಿಶೇಷತೆಯನ್ನು ನೀವು ಕಳಿಸಿಕೊಡಲು ಕೋರಿದೆ. ಚಿತ್ರಗಳಿದ್ದರೂ ಹಾಕಲು ಕೋರಿದೆ* 

ತಮ್ಮ ನಂಬುಗೆಯ
ಬಸವರಾಜಪ್ಪ ಬಿ.ಆರ್, ಉಪನಿರ್ದೇಶಕರು (ಅಭಿವೃದ್ಧಿ) ಡಯಟ್. ಶಿವಮೊಗ್ಗ.

ಡಾ. ಹರಿಪ್ರಸಾದ್ ಜಿ. ವಿ ಸಂಪರ್ಕ (gvharivana@gmail.com , diet.shimoga@gmail.com ) ವಾಟ್ಸಾಪ್ - 9964314575


Dec 29, 2020

Sep 30, 2020

 

Amazing! You touch it and you can see the miracle!

Sep 11, 2020

 ಕೋವಿಡ್-19 (ಕೊರೊನಾವೈರಸ್) ಹರಡುವುದನ್ನು ತಡೆಯಲು:

  • ಸೋಪ್ ಮತ್ತು ನೀರು, ಅಥವಾ ಆಲ್ಕೋಹಾಲ್ ಆಧಾರಿತ ಹ್ಯಾಂಡ್ ರಬ್ ಬಳಸಿ, ನಿಮ್ಮ ಕೈಗಳನ್ನು ಆಗಾಗ್ಗೆ ತೊಳೆಯಿರಿ. 
  • ಸಾರ್ವಜನಿಕ ಸ್ಥಳಗಳಲ್ಲಿ ಬೇರೆಯವರಿಂದ ಕನಿಷ್ಟ 6 ಅಡಿಗಳ ಅಂತರವನ್ನು ಕಾಪಾಡಿ.
  • ಮನೆಯಿಂದ ಹೊರಗೆ ಬರುವಾಗ ತಪ್ಪದೇ ಮುಖಕ್ಕೆ ಮಾಸ್ಕ್ ಧರಿಸಿ.
  • ಕೆಮ್ಮು ಅಥವಾ ಸೀನುವ ಯಾರಿಂದಲೂ ಸುರಕ್ಷಿತ ದೂರವನ್ನು ಕಾಪಾಡಿಕೊಳ್ಳಿ.
  • ನಿಮ್ಮ ಕಣ್ಣು, ಮೂಗು ಅಥವಾ ಬಾಯಿಯನ್ನು ಮುಟ್ಟಬೇಡಿ.
  • ನೀವು ಕೆಮ್ಮುವಾಗ ಅಥವಾ ಸೀನುವಾಗ ಮೂಗು ಮತ್ತು ಬಾಯಿಯನ್ನು ನಿಮ್ಮ ಬಾಗಿದ ಮೊಣಕೈ, ಟಿಶ್ಯೂ ಪೇಪರ್ ಅಥವಾ ಕರವಸ್ತ್ರದಿಂದ ಮುಚ್ಚಿ.
  • ನಿಮಗೆ ಅನಾರೋಗ್ಯ ಅನಿಸಿದರೆ ಮನೆಯಲ್ಲೇ ಇರಿ.
  • ನಿಮಗೆ ಜ್ವರ, ಕೆಮ್ಮು ಮತ್ತು ಉಸಿರಾಟದ ತೊಂದರೆ ಇದ್ದರೆ, ವೈದ್ಯಕೀಯ ಚಿಕಿತ್ಸೆ ಪಡೆಯಿರಿ. 
  • ನಿಮ್ಮ ಸ್ಥಳೀಯ ಆರೋಗ್ಯ ಪ್ರಾಧಿಕಾರದ ನಿರ್ದೇಶನಗಳನ್ನು ಅನುಸರಿಸಿ.


Aug 5, 2020

ನುಡಿಮುತ್ತುಗಳು

"ಭೂಮಿಗೆ ಬಿದ್ದ ಬೀಜ, ಎದೆಗೆ ಬಿದ್ದ ಅಕ್ಷರ, ಇಂದಲ್ಲ ನಾಳೆ ಫಲ ನೀಡುತ್ತದೆ."

"ನಿಮ್ಮ ಗುರಿಯನ್ನು ಕೇಳಿ ಜನ ನಿನ್ನನ್ನು ಒಮ್ಮೆ ಹುಚ್ಚ ಎನ್ನಬೇಕು. 
  ನೀನು ಸಾಧಿಸಿದ ಮೇಲೆ ಅವರು ಹುಚ್ಚರಾಗಬೇಕು."

"ನಿದ್ದೆಯಲ್ಲಿ ಕಾಣುವಂತಹುದು ಕನಸಲ್ಲ,
  ನಿದ್ದೆ ಗೆಡುವಂತೆ ಮಾಡುವುದೇ ನಿಜವಾದ ಕನಸು."

"ಧೈರ್ಯದಿಂದ ಎದುರಿಸುವ ಮನಸ್ಸು ಬಂದಾಗಲೇ ನೀವು ಅರ್ಧ ಗೆದ್ದಂತೆ"

"ಶಿಕ್ಷಣ ಎಂಬುದು ಹುಲಿ ಹಾಲಿದ್ದಂತೆ,
  ಕುಡಿದವನು ಘರ್ಜಿಸಲೇಬೇಕು."

"ಬರೆದಿಟ್ಟಂತೆ ಜೀವನ ಮಾಡಲು ಯಾರಿಗೂ ಸಾಧ್ಯವಿಲ್ಲ,
  ಆದರೆ ಬರೆದಿಡುವಂತಹ ಜೀವನ ಮಾಡಲು ಸಾಧ್ಯವಿದೆ."

"ಬಡವನಾಗಿ ಹುಟ್ಟುವುದು ನಿನ್ನ ತಪ್ಪಲ್ಲ,
  ಬಡವನಾಗಿ ಸಾಯುವುದು ನಿನ್ನ ತಪ್ಪು."

"ಕೊಂಬೆ ಮೇಲೆ ಕುಳಿತ ಹಕ್ಕಿ ನಂಬಿರುವುದು ಬಲವಾದ ಕೊಂಬೆಯನ್ನಲ್ಲ,
  ತನ್ನ ಪುಟ್ಟ ರೆಕ್ಕೆಯನ್ನು!!"

"ಕಲ್ಲು ಉಳಿಯ ಏಟು ತಿನ್ನದಿದ್ದರೆ ಅದು ಬರೆ ಕಲ್ಲು,
  ಅದು ಉಳಿಯ ಏಟು ತಿಂದರೆ ಅದೊಂದು ಮೂರ್ತಿ."

"ಸೋತೆ ಎಂದು ನೀ ಮುಂದಿಟ್ಟ ಹೆಜ್ಜೆ ಹಿಂದಿಡಬೇಡ
  ಏಕೆಂದರೆ ಯಾರಿಗೆ ಗೊತ್ತು
  ಆ ಹೆಜ್ಜೆ ನಿನ್ನ ಇತಿಹಾಸವನ್ನೇ ಸೃಷ್ಟಿ ಮಾಡುವ ಹೆಜ್ಜೆಯಾಗಿರಬಹುದು."

"ಸುಲಭವಾಗಿ ಪಡೆದದ್ದು ಬೇಗ ಕಳೆದುಕೊಳ್ಳುತ್ತೇವೆ.
  ಆದರೆ ಶ್ರಮದಿಂದ ನಿಧಾನವಾಗಿ ಪಡೆದಿದ್ದು ದೀರ್ಘಕಾಲ ಉಳಿಯುತ್ತದೆ."

"ಯಾವುದೇ ಕೆಲಸವನ್ನು ಶ್ರದ್ದೆಯಿಂಂದ ಮಾಡು,
  ಫಲದ ಬಗ್ಗೆ ಚಿಂತಿಸಬೇಡ, ಫಲ ಬಂದೇ ಬರುತ್ತದೆ."

______________________________________________________________________

ನುಡಿಮುತ್ತುಗಳು - ಪರಿಸರ

ಸಸಿ ಮರವನ್ನು ಕೇಳಿತು
"ಅಮ್ಮಾ ನಿನ್ನನ್ನು ಕಡಿದು ಏನು ಮಾಡುತ್ತಾರೆ ?"
ಅಮ್ಮ ಹೇಳಿದ್ದು
"ನನ್ನಿಂದ ಕಾಗದ ತಯಾರು ಮಾಡಿ ಅದರ ಮೇಲೆ  ಮರ ಬೆಳೆಸಿ ಕಾಡು ಉಳಿಸಿ ಎಂದು ಬರೆಯುತ್ತಾರೆ."


ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ

SAVE THE TREES, THAT SAVE US

“ಪ್ರಕೃತಿ ನಮ್ಮ ಬದುಕಿನ ಭಾಗವಲ್ಲ. ನಾವು ಪ್ರಕೃತಿಯ ಒಂದು ಭಾಗ.”

“ನನ್ನ ಸುತ್ತಮುತ್ತ ನಡೆಯುವ ನೂರಾರು ಪರಿಸರದ ವಿದ್ಯಮಾನಗಳನ್ನು ಅದರಲ್ಲಿ ಪಾತ್ರಧಾರಿಯಾಗದೆ ಪ್ರೇಕ್ಷಕನಾಗಿ ದೂರ ನಿಂತು ನೋಡಬೇಕೆಂಬುದೆ ನನ್ನ ಉದ್ದೇಶ.”

“ಪರಿಸರವನ್ನು ಉಳಿಸ್ಬೇಕು ಅಂತಿದ್ದರೆ, ಮಕ್ಕಳಿಗೆ ಶಿಕ್ಷಣ ಕೊಡುವುದೇ ಅತ್ಯುತ್ತಮ ವಿಧಾನ. ಯಾಕೆಂದರೆ ಈ ದೊಡ್ಡವರ ಬುದ್ಧಿ ಬದಲಾಯಿಸುವುದು ವಿಪರೀತ ಕಷ್ಟ. ಎಷ್ಟು ಹೇಳಿದ್ರೂ ಅರ್ಥ ಆಗೋದಿಲ್ಲ. ಅದೇ ಮಕ್ಕಳಿಗೆ ಅವರ ಟೀಚರ್ ಹೇಳಿಬಿಟ್ರು ಅಂದ್ರೆ ವೇದವಾಕ್ಯ ಅದು.”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ

ಕಾಡು ಬೆಳೆಸಿ, ನಾಡು ಉಳಿಸಿ

ಮನೆಗೊಂದು ಮರ, ಊರಿಗೊಂದು ವನ

ಮರ ಬೆಳೆಸಿ, ಬರ ಅಳಿಸಿ, ತಾಪ ಇಳಿಸಿ.

ನಿಮ್ಮ ವಂಶ ಬೆಳಗಲು ಮಗನನ್ನು ಬೆಳೆಸಿ ; 

ಮಗನ ವಂಶ ಬೆಳಗಲು ಮರಗಳನ್ನು ಬೆಳೆಸಿ.

ಕಾಡಿಲ್ಲದೇ ಮಳೆ ಇಲ್ಲಾ    

ಮಳೆ ಇಲ್ಲದೇ ಬೆಳೆ ಇಲ್ಲಾ