*ಗೌರವಾನ್ವಿತ ಶಿಕ್ಷಕ, ಶಿಕ್ಷಣಾಸಕ್ತ ಸ್ನೇಹಿತರೇ*
ರಾಷ್ಟ್ರೀಯ ಶಿಕ್ಷಣ ನೀತಿ 2020 ನಮ್ಮ ಸ್ಥಳೀಯ ವೈಶಿಷ್ಟ್ಯವನ್ನು ಉಳಿಸಿಕೊಂಡು ರಾಷ್ಟ್ರ, ಅಂತಾರಾಷ್ಟ್ರೀಯ ಅರಿವು ಹೊಂದುವ ಶಿಫಾರಸು ಮಾಡಿರುವುದು ತಮಗೆ ತಿಳಿದೇ ಇದೆ. ಇಂತಹದ್ದೊಂದು ಚೆಂದದ ಶಿಫಾರಸನ್ನು ಬಳಸಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ. ನಾವೆಲ್ಲಾ ಸಿದ್ಧವಾಗುವ ಪಠ್ಯಕ್ರಮ ಚೌಕಟ್ಟಿಗೆ ನಮ್ಮ ಸ್ಥಳೀಯ ಕೊಡುಗೆಗಳನ್ನು ನೀಡೋಣ. ನಮ್ಮದನ್ನು ನಾವು ಗುರುತಿಸಿ, ನಮ್ಮ ಪಾಠಗಳ ರಚನೆಗೆ ನಾವೇ ಜವಾಬ್ದಾರರಾಗೋಣ. ಆದ್ದರಿಂದ *ತಮ್ಮಲ್ಲಿ ತಮ್ಮಲ್ಲಿ ಮೂರು ಕೋರಿಕೆಗಳಿವೆ, ಯಾವುದಾದರೂ ಒಂದು, ಎರಡು ಅಥವ ಮೂರನ್ನೂ ಮಾಡಿ ಕಳಿಸಿದಲ್ಲಿ ಉಪಕೃತರಾಗುತ್ತೇವೆ*.
1. *ನಮ್ಮ ತರಗತಿ ಪ್ರಕ್ರಿಯೆ, ನಮ್ಮ ಸುತ್ತಮುತ್ತ ನಾವು ಗಮನಿಸಿದ ಉತ್ತಮ ತರಗತಿ ಪ್ರಕ್ರಿಯೆಗಳನ್ನು ಒಂದು ಅಥವ ಅರ್ಧ ಪುಟದಲ್ಲಿ ದಯವಿಟ್ಟು ಹಂಚಿಕೊಳ್ಳಲು ಕೋರಿದೆ* ಶಿಕ್ಷಕರು ಅಥವ ಸಮುದಾಯ ಮಕ್ಕಳಿಗೆ ಯಾವುದಾದರೂ ವಿಷಯವನ್ನು ಅತ್ಯುತ್ತಮವಾಗಿ ಕಲಿಸಿದ, ಕಲಿಸುವ ರೀತಿಯನ್ನು ನಾವು ಶಿಕ್ಷಣ ಶಾಸ್ತ್ರದಲ್ಲಿ ದಾಖಲಿಸುವುದು ಬಹಳ ಬಹಳ ಅಗತ್ಯ. ದಯವಿಟ್ಟು ಇಂತಹುದ್ದನ್ನು ತಾವು ಮಾಡಿದಲ್ಲಿ, ನೋಡಿದ್ದಲ್ಲಿ, ಕೇಳಿದ್ದಲ್ಲಿ ದಯವಿಟ್ಟು ಹಂಚಿಕೊಳ್ಳಿ. ಇಲ್ಲಿ ಕಟ್ಟಡ, ಕೊಠಡಿ, ಚಿತ್ರ,ಪೇಂಟಿಂಗ್, ಪಾರ್ಕ್ ಗಿಂತಲೂ ತರಗತಿಯೊಳಗೆ ಅಥವ ಹೊರಗೆ ಮಕ್ಕಳಿಗೆ ಕಲಿಸುವ ಪ್ರಕ್ರಿಯೆ ಬಹಳ ಪ್ರಮುಖವಾಗಿರುತ್ತದೆ.
2. ಎರಡನೆಯ ಕೋರಿಕೆಯಾಗಿ ತಾವು ಕಲಿಸಿದ, ಕಲಿಸುವುದನ್ನು ಗಮನಿಸಿದ ವಿಶೇಷ ವಿಷಯಗಳಿದ್ದರೆ ದಯವಿಟ್ಟು ತಿಳಿಸಿ. (ಅದು ಯಾವುದೇ ಕೌಶಲ, ವಿಷಯ ಇರಬಹುದು)
3. ಮೂರನೆಯ ಕೋರಿಕೆಯಾಗಿ ನಮ್ಮ ಮಕ್ಕಳು 21ನೇ ಶತಮಾನದಲ್ಲಿ ಕೆಲವು ಕೌಶಲಗಳನ್ನು ಅನಿವಾರ್ಯವಾಗಿ ಕಲಿಯಬೇಕಿದೆ. ಈ ಕಲಿಕೆಗಳು ಅವರ ಜೀವನ ಸುಲಲಿತಗೊಳಿಸುವುದಲ್ಲದೇ ಸಮಾಜ, ಜಗತ್ತು, ಭೂಮಿಯನ್ನು ಕಂಪನಶೀಲ ಸುಸ್ಥಿರ ಸಮಾಜವಾಗಿಸುತ್ತವೆ. ಅಂತಹಾ ಕೌಶಲಗಳೆಂದರೆ
- ಸಹಭಾಗಿತ್ವ ಕೌಶಲ
- ಸಂವಹನ ಕೌಶಲ
- ಐ ಸಿ ಟಿ ಬಳಕೆ
- ಜ್ಞಾನ ಸೃಷ್ಟಿ, ಸೃಜನಶೀಲತೆ
- ಅನುಭೂತಿ, ಸಾಂಘಿಕ ಬದುಕು.
*ದಯಮಾಡಿ ಸದರಿ ಮೂರು ಕೋರಿಕೆಯಲ್ಲಿ ರಾಜ್ಯದ ಯಾವುದೇ ಮೂಲೆಯಲ್ಲಿ ನಿಮಗೆ ಕಂಡ ವಿಶೇಷತೆಯನ್ನು ನೀವು ಕಳಿಸಿಕೊಡಲು ಕೋರಿದೆ. ಚಿತ್ರಗಳಿದ್ದರೂ ಹಾಕಲು ಕೋರಿದೆ*
ತಮ್ಮ ನಂಬುಗೆಯ
ಬಸವರಾಜಪ್ಪ ಬಿ.ಆರ್, ಉಪನಿರ್ದೇಶಕರು (ಅಭಿವೃದ್ಧಿ) ಡಯಟ್. ಶಿವಮೊಗ್ಗ.
ಡಾ. ಹರಿಪ್ರಸಾದ್ ಜಿ. ವಿ ಸಂಪರ್ಕ (gvharivana@gmail.com , diet.shimoga@gmail.com ) ವಾಟ್ಸಾಪ್ - 9964314575
No comments:
Post a Comment